ಪರಿಚಯ English Kannada

ಹೆಸರು : ಡಾ. ಮೂಡ್ನಾಕೂಡು ಚಿನ್ನಸ್ವಾಮಿ.
ಪೋಷಕರು : ತಂದೆ : ಬಸವರಾಜಯ್ಯ ತಾಯಿ: ಗೌರಮ್ಮ
ಸ್ಥಳ : ಮೂಡ್ನಾಕೂಡು, ಚಾಮರಾಜನಗರ ಜಿಲ್ಲೆ.
ಹುಟ್ಟಿದ ದಿನಾಂಕ : ೨೨-೯-೧೯೫೪
ಶಿಕ್ಷಣ : ದೊಡ್ಡರಾಯಪೇಟೆ, ಮೂಡ್ನಾಕೂಡು, ಚಾಮರಾಜನಗರ, ಮ್ಯೆಸೂರು, ದಾರವಾಡ,ಹಂಪಿ
ಪದವಿ : ಎಂ.ಕಾಂ., ಎಂ.ಎ.(ಕನ್ನಡ)., ಡಿ.ಲಿಟ್.
ವೃತ್ತಿ : ಬೆಂಗಳೂರು ಮಹಾನಗರ ಸಾರಿಗೆ ನಿಗಮದಲ್ಲಿ ನಿರ್ದೇಶಕರು ಹಾಗೂ ಆರ್ಥಿಕ ಸಲಹೆಗಾರರು(, ಮೈಸೂರು, ಹಾಸನ, ಹುಬ್ಬಳ್ಳಿ, ಗದಗ, ಬೆಂಗಳೂರು ಮತ್ತು ಗುಲ್ಬರ್ಗಾಗಳಲ್ಲಿ ಸೇವೆ .
ಪ್ರವೃತ್ತಿ : ಸಾಹಿತ್ಯ ರಚನೆ, ಸಂಸ್ಕೃತಿ ಚಿಂತನೆ, ರಂಗಬೂಮಿ ಮತ್ತು ಸಮಾಜ ಸೇವೆ.
ಕಾವ್ಯ ನಾಮ : ಮೂಡ್ನಾಕೂಡು ಚಿನ್ನಸ್ವಾಮಿ.
ಭಾಷೆಗಳು : Speaking :  ಕನ್ನಡ, ಇಂಗ್ಲೀಷ್, ಹಿಂದಿ
    Writing :  ಕನ್ನಡ ಮತ್ತು ಇಂಗ್ಲೀಷ್

ಕೃತಿಗಳು

ಕವಿತೆ :
 • ಕೊಂಡಿಗಳು ಮತ್ತು ಮುಳ್ಳುಬೇಲಿಗಳು (1989)
 • ಗೋಧೂಳಿ (1993)
 • ನಾನೊಂದು ಮರವಾಗಿದ್ದರೆ (1998)
 • ಮತ್ತೆ ಮಳೆ ಬರುವ ಮುನ್ನ (2000)
 • (ಮೊದಲೆರಡು ಸಂಕಲನಗಳ ಪುನರ್‍ಮುದ್ರಣ)
 • ಚಪ್ಪಲಿ ಮತ್ತು ನಾನು (2001)
 • ಕನಕಾಂಬರಿ (2003)
 • ಚಂದಿರನ ಕಣ್ಣು ಇಂಗಲಾರದ ಹುಣ್ಣು (ಆಯ್ದ ಕವನ ಸಂಕಲನ-2004)
 • ಬುದ್ಧ ಬೆಳದಿಂಗಳು (2010)
ನಾಟಕ :
 • ಕೆಂಡಮಂಡಲ (1991)
 • ಮೂರು ಬೀದಿ ನಾಟಕಗಳು (2004)
 • ಬಹುರೂಪಿ (ಕಾವ್ಯನಾಟಕ) – (2003)
 • ಮೂಡ್ನಾಕೂಡು ನಾಟಕಗಳು (2010)
ಕಥೆ :
 • ಮೋಹದ ದೀಪ (1999)
 • ಪಾಪಪ್ರಜ್ಞೆ (2015)
ಲೇಖನ :
 • ನೊಂದವರ ನೋವು (2002)
 • ಮಾತು ಮಂಥನ (2004)
 • ಒಂದು ಕೊಡ ಹಾಲಿನ ಸಮರ (2008)
 • ಅಪರಿಮಿತದ ಕತ್ತಲೆ (2010)
 • ಚಿನ್ನುಡಿ (2015)
ವ್ಯಕ್ತಿಚಿತ್ರ :
 • ಭೀಮಾಬೋಯಿ (1994)
 • ಬೆಳಕಿನ ಸರದಾರರು (2015)
ಪತ್ರಗಳು :
 • ಓಲೆ-ಒಕ್ಕಣೆ (2005)
ಅನುವಾದ :
 • ಯುವ ಬೌದ್ಧರಿಗೊಂದು ದರ್ಶನ (2002)
 • ದೀಘ ನಿಕಾಯ (ಪರಿಷ್ಕರಣೆ- 2012)
 • ದಲಿತ ದರ್ಶನ (2014)
ಸಂಪಾದನೆ :
 • ದಲಿತ ಕಥೆಗಳು (1996)
 • ಕಾವ್ಯ ಬಂಗಾರ (2005)
  (ದಸರಾ ಕವಿಗೋಷ್ಠಿ 2004 ರ ಕವಿತೆಗಳು)
 • ಮರಳಿ ಮನೆಗೆ (2006)
  (ಪ್ರಧಾನ ಸಂಪಾದಕ- ಅಂಬೇಡ್ಕರ್ ಧಮ್ಮ ದೀಕ್ಷಾ ಸುವರ್ಣವರ್ಷಾಚರಣೆಯ ಸ್ಮರಣ ಸಂಚಿಕೆ)
 • ಕಾವ್ಯ 2005 (ಕರ್ನಾಟಕ ಸಾಹಿತ್ಯ ಅಕಾಡೆಮಿ ವಾರ್ಷಿಕ)
ಇತರೆ ಭಾಷೆಗಳಲ್ಲಿ: : ಆಯ್ದ ಕವಿತೆಗಳು
 • ಅಂಗಾರ್ ಕೀ ಚೋಟೀ ಪರ್ (ಹಿಂದಿ - 2001) ಅನು: ಧರಣೇಂದ್ರ ಕುರಕುರಿ
 • ಪೊಯೆಮಾಸ್: ಮೂಡ್ನಾಕೂಡು ಚಿನ್ನಸ್ವಾಮಿ (ಸ್ಪ್ಯಾನಿಷ್-2004)ಅನು: ಪ್ರೊ. ರೊವೀನಾ ಹಿಲ್
 • ಝಕ್ಮ್ ಕಸಕ್ ಆವಾಜ್ (ಉರ್ದು-2012) ಅನು: ನೂರುದ್ದೀನ್ ನೂರ್
ವಿಚಾರ ಸಾಹಿತ್ಯ
 • ಅಸ್ಮಿತಾ ಕಿ ಖೋಜ್ (ಹಿಂದಿ-2010)('ಒಂದು ಕೊಡ ಹಾಲಿನ ಸಮರ' ಗದ್ಯ ಕೃತಿಯ ಅನುವಾದ), ಅನು: ಭಾಲಚಂದ್ರ ಜಯಶೆಟ್ಟಿ
ಲೇಖಕರ ಕೃತಿಗಳನ್ನು ಕುರಿತು :
 • ಬಯಲ ಬೆಳಕು (2008)ಸಂ. ಅಪ್ಪಗೆರೆ ಸೋಮಶೇಖರ
 • ಬಯಲ ಬೆಳಕು (ಪರಿಷ್ಕೃತ ಮುದ್ರಣ) (2010)
 • ಬೇಯುವ ಬೇಗೆ (2011)(ಮೂ.ಚಿ. ಜೀವನ ಮತ್ತು ಸಾಹಿತ್ಯ ಕುರಿತ ಸಂಶೋಧನಾ ಕೃತಿ) ಡಾ. ಮಲ್ಲಪ್ಪ ಆರ್. ಚಲವಾದಿ
ಸಾಹಿತ್ಯ, ಸಂಸ್ಕೃತಿ. ಸಮಾಜ ಮತ್ತು ರಂಗ ಚಟುವಟಿಕೆಗಳು :
 • ಸಾಹಿತ್ಯ ಪರಿಷತ್ತು 80, ದಸರಾ ಕವಿಗೋಷ್ಠಿ, ಹಂಪಿ ಉತ್ಸವ,
 • ಲಕ್ಕುಂಡಿ ಉತ್ಸವ, ಕದಂಬೋತ್ಸವ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ -2003, ರಾಜ್ಯ ಮತ್ತು ಕೇಂದ್ರ ಸಾಹಿತ್ಯ ಅಕಾಡಮಿಗಳು ನಡೆಸಿದ ಪ್ರತಿಷ್ಠಿತ ಕವಿಗೋಷ್ಠಿಗಳಲ್ಲಿ ಕವಿತಾವಾಚನ.
 • 1995 ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಮೂಡಿಗೆರೆಯಲ್ಲಿ ನಡೆಸಿದ ಕಾವ್ಯಕಮ್ಮಟದ ನಿರ್ದೇಶಕ.
 • 1999ರ ಗದಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ.
 • 2007 ರಲ್ಲಿ ಚಾಮರಾಜನಗರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ.
 • ಮೈಸೂರಿನ ದಸರಾ ಕವಿಗೋಷ್ಠಿ 2003 ಮತ್ತು 2004 ರ ಕಾರ್ಯಾಅಧ್ಯಕ್ಷತೆ.
 • ಫೆ.2010, ಗದುಗಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ
 • "ವಿಶ್ವಗ್ರಾಮದ ಪರಿಕಲ್ಪನೆಯ ಹಿನ್ನೆಲೆಯಲ್ಲಿ ಭಾರತದ ಜಾತಿ ಪದ್ಧತಿ ಮತ್ತು ಅಸ್ಪೃಷ್ಯತೆಯ ಸ್ವರೂಪ" ಎಂಬ ಮಹಾ ಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಡಿ.ಲಿಟ್., ಪದವಿ.
 • ಅಖಿಲ ಭಾರತ ಆಕಾಶವಾಣಿ (AIR) ಗಣರಾಜ್ಯೋತ್ಸವದ ಅಂಗವಾಗಿ ನಾಗಪುರದಲ್ಲಿ ಆಯೋಜಿಸಿದ 2016 ರ ರಾಷ್ಟ್ರೀಯ ಕವಿಗೋಷ್ಟಿಯಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ 'ಚಪ್ಪಲಿ ಮತ್ತು ನಾನು' ಕವಿತಾ ವಾಚನ, 22 ಭಾರತೀಯ ಭಾಷೆಗಳಲ್ಲಿ ಅದರ ಅನುವಾದ, ಆಯಾ ರಾಜ್ಯಕೇಂದ್ರಗಳಲ್ಲಿ ಏಕಕಾಲದಲ್ಲಿ ಪ್ರಸಾರ.
 • ಅನೇಕ ಕವಿತೆಗಳು ಬೆಂಗಾಲಿ, ತೆಲುಗು, ಮರಾಠಿ, ಮಲಯಾಳಂ ಹಾಗೂ ಉರ್ದು ಭಾಷೆಗಳಿಗೆ ಭಾಷಾಂತರಗೊಂಡಿವೆ.
 • ಪ್ರೊ. ರೊವೀನಾ ಹಿಲ್ ವೆನಿಜುಯೇಲಾ ಕವಿಯಿತ್ರಿ, ಇವರ ಆಯ್ದ ಕವಿತೆಗಳನ್ನು ಸ್ಪ್ಯಾನಿಷ್ ಭಾಷೆಗೆ ಭಾಷಾಂತರಿಸಿದ್ದಾರೆ. ಅವುಗಳಲ್ಲಿ 10 ಕವಿತೆಗಳು ಕೊಲಂಬಿಯಾದ ಸಾಹಿತ್ಯ ಪತ್ರಿಕೆಯಾದ "ಆಕ್ರ್ವಿಟ್ರಾವೆ"ನ ಜೂನ್ 2003 ರ ಸಂಚಿಕೆಯಲ್ಲಿ ಪರಿಚಯದೊಂದಿಗೆ ಪ್ರಕಟವಾಗಿವೆ.
 • ದಕ್ಷಿಣ ಅಮೆರಿಕದ ವೆನೆಜುಯೇಲಾ ಸರ್ಕಾರ 2004 ರಲ್ಲಿ ಇವರ ಕವಿತೆಗಳನ್ನು 'ವಿಶ್ವ ಕಾವ್ಯ ಮಾಲೆ' (world poetry series) ಅಡಿಯಲ್ಲಿ ಪ್ರಕಟಿಸಿದೆ. ಕನ್ನಡದಿಂದ ಸ್ಪ್ಯಾನಿಷ್ ಭಾಷೆಗೆ ಗ್ರಂಥರೂಪದಲ್ಲಿ ಪ್ರಕಟಗೊಂಡ ಮೊದಲ ಕವಿ ಎಂಬ ಹೆಗ್ಗಳಿಕೆ ಇವರದ್ದಾಗಿದೆ.
 • ಆಮಿರ್ ಓರ್ ಸಂಪಾದಿಸಿದ ಹೀಬ್ರೂ ಭಾಷೆಯ ವಿಶ್ವ ಕಾವ್ಯ ಸಂಗ್ರಹ-2016 ದಲ್ಲಿ 'ಚಿಂದಿ ಆಯುವ ಚಿಣ್ಣನಿಗೆ' ಮತ್ತು 'ಗಂಧರ್ವ ಮಿಲನ' ಕವಿತೆಗಳ ಅನುವಾದ ಸೇರಿವೆ
 • ಅನುವಾದಿತ ಇಂಗ್ಲಿಷ್ ಕವಿತೆಗಳು ಇಂಡಿಯನ್ ಲಿಟರೇಚರ್, ದಿ ನ್ಯೂ ಕ್ವೆಸ್ಟ್, ಮತ್ತು ಲಿಟಲ್ ಮ್ಯಾಗಝೀನ್ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ.
 • ಅಂತರ್ಜಾಲ ಪತ್ರಿಕೆ ಮ್ಯೂಸ್ ಇಂಡಿಯಾ ಮತ್ತು ಆಸ್ಟ್ರಿಯಾ ದೇಶದ ಜರ್ಮನ್ ಪತ್ರಿಕೆ Driesch Verlag ನಿಯತ ಕಾಲಿಕೆಯಲ್ಲಿ ಪ್ರಕಟವಾಗಿವೆ.
 • ಆಕಾಶವಾಣಿ ಮತ್ತು ದೂರದರ್ಶನಗಳಲ್ಲಿ ಕವಿತೆ ವಾಚನ, ಚಿಂತನ, ¨ಭಾಷಣ, ಸಂವಾದ ಕಾರ್ಯಕ್ರಮಗಳಲ್ಲಿ ಭಾಗವಹಿಕೆ.
ಅಂತರ ರಾಷ್ಟ್ರೀಯ ಕಾರ್ಯಕ್ರಮಗಳು :
 • ವಾ.ಕ.ರ.ಸಾ.ನಿಗಮ, ಗದಗ ವಿಭಾಗದ ಅತ್ಯುತ್ತಮ ಕಾರ್ಯಾಚರಣೆಗೆ 1999 ರಲ್ಲಿ ಟೊರಾಂಟೋದಲ್ಲಿ ನಡೆದ 53 ನೇ ಅಂತರರಾಷ್ಟ್ರೀಯ ಸಾರ್ವಜನಿಕ ಸಾರಿಗೆ ಸಮ್ಮೇಳನಕ್ಕೆ ಪ್ರತಿನಿಯೋಜನೆ. ಅಮೆರಿಕಾ ಮತ್ತು ಕೆನಡಾ ದೇಶಗಳ ಪ್ರವಾಸ.
 • ಮೈಸೂರಿನಲ್ಲಿ ಜನವರಿ 2003 ರಲ್ಲಿ ನಡೆದ 3ನೇ ಏಷಿಯಾ ಪೆಸಿಫಿಕ್ ಮತ್ತು 109 ನೇ ಇಂಡಿಯ ಮತ್ತು ಕೆನೆಡಿಯನ್ ಸ್ಟಡೀಸ್ ಅಂತರ ರಾಷ್ಟ್ರೀಯ ಸಮ್ಮೇಳನದಲ್ಲಿ ಕವಿತಾ ವಾಚನ ಮತ್ತು ಆ ಕವಿತೆಗಳ ಮೇಲೆ ಚರ್ಚೆ.
 • ಮೇ, 2004 ರಲ್ಲಿ ಹಾಲಿವುಡ್(ಲಾಸ್ ಏಂಜಲೀಸ್) ನ ಬೋಧಿ ಟ್ರೀ ಆಶ್ರಯದಲ್ಲಿ ಆಹ್ವಾನಿತ ಶ್ರೋತೃಗಳ ಮುಂದೆ ಕವಿತಾ ವಾಚನ, ಚರ್ಚೆ.
 • ಮೇ, 2004 ರಲ್ಲಿ ವೆನೆಜುಯೇಲಾ ದೇಶದ ಮೆರಿಡಾ ರಾಜ್ಯದ ಆಹ್ವಾನದ ಮೇರೆಗೆ ಆಂಡಿಸ್ ವಿಶ್ವವಿದ್ಯಾಲಯದಲ್ಲಿ `ಭಾರತದಲ್ಲಿ ಜಾತಿ ಪದ್ದತಿ:ಅಂದು-ಇಂದು' ಮತ್ತು `ದಕ್ಷಿಣ ಭಾರತದ ಪ್ರತಿಭಟನಾ ಕಾವ್ಯ' ಎಂಬ ವಿಷಯಗಳನ್ನು ಕುರಿತು ಉಪನ್ಯಾಸ.ರಾಜಧಾನಿ ಕ್ಯಾರಕಾಸ್ ನ ಸಂಸ್ಕೃತಿ ಕೇಂದ್ರದಲ್ಲಿ ಕಾವ್ಯ ವಾಚನ ಮತ್ತು ಅಲ್ಲಿನ ವೆಬ್ ಸೈಟ್‍ನಲ್ಲಿ ಸ್ಪ್ಯಾನಿಷ್ ಅನುವಾದಿತ ಕವಿತೆಗಳ ಪ್ರಕಟಣೆ. ದಕ್ಷಿಣ ಅಮೇರಿಕಾ ಪ್ರವಾಸ.
 • ಫೆ. 2007 ರಲ್ಲಿ ದ. ಅಮೆರಿಕಾದ ನಿಕರಾಗುವಾ ದೇಶದಲ್ಲಿ ನಡೆದ 'ಗ್ರೆನೆಡಾ ಅಂತರ ರಾಷ್ಟ್ರೀಯ ಕಾವ್ಯಮೇಳ' ದಲ್ಲಿ ಭಾಗವಹಿಸಿ ಅನೇಕ ಕಾರ್ಯಕ್ರಮಗಳಲ್ಲಿ ಕವಿತಾ ವಾಚನ. ಅಲ್ಲಿನ ಗ್ರೆನೆಡಾ ಮತ್ತು ಡಿರಿಯಾಂಬಾ ನಗರಾಡಳಿತಗಳು'ಡಿಸ್ಟಿಂಗ್ವಷ್ಡ್ ವಿಸಿಟರ್' ಮತ್ತು 'ಇಲ್ಲಸ್ಟ್ರಿಯಸ್ ವಿಸಿಟರ್' ಎಂಬ ಮಾನಪತ್ರಗಳನ್ನು ನೀಡಿ ಗೌರವಿಸಿವೆ.
 • ಅ. 2007 ರಲ್ಲಿ ಇಸ್ರೇಲ್ ದೇಶದ ರಾಜಧಾನಿ ಟೆಲ್ ಅವಿವ್‍ನಲ್ಲಿ ನಡೆದ 'ಶಾರ್ ಅಂತರರಾಷ್ಟ್ರೀಯ ಕಾವ್ಯಮೇಳ'ದಲ್ಲಿ ಕವಿತಾವಾಚನ. ಅದಕ್ಕಾಗಿ ಕೆಲವು ಕವಿತೆಗಳನ್ನು ಹೀಬ್ರೂ ಭಾಷೆಗೆ ಅನುವಾದಿಸಲಾಗಿದೆ. ಹಾಗೂ
 • ಇವರ ಇ-ಮೇಲ್ ಸಂದರ್ಶನವನ್ನು ಹೀಬ್ರೂ ನಿಯತಕಾಲಿಕೆ 'ಹೆಲಿಕಾನ್' ದಲ್ಲಿ ಪ್ರಕಟಿಸಲಾಗಿದೆ. ಅಲ್ಲಿನ ಟಿವಿಯಲ್ಲಿ ಕಾವ್ಯವಾಚನ ಮತ್ತು ಪತ್ರಿಕೆಗಳಿಗೆ ಸಂದರ್ಶನ.
 • ಜೆರುಸಲೆಮ್ ನಗರದಲ್ಲಿ 'ನಾನೊಂದು ಮರವಾಗಿದ್ದರೆ' ಕವಿತೆಯ ರಂಗರೂಪದ ಏಕವ್ಯಕ್ತಿ ಪ್ರದರ್ಶನವನ್ನು ಸಮ್ಮೇಳನದ ಭಾಗವಾಗಿ ಏರ್ಪಡಿಸಲಾಗಿತ್ತು.
 • ಸ್ವೀಡಿಷ್ ಪತ್ರಕರ್ತ ಮಿ.ಪೀಟರ್ ನೆಡೆಸಿದ ಸಂದರ್ಶನವನ್ನು ಡಿಸೆಂಬರ್, 6, 2006 ರಂದು ಆಸ್ಟ್ರಿಯ, ಜರ್ಮನಿ ಮತ್ತು ಸ್ವೀಡನ್ ದೇಶಗಳ ಆಕಾಶವಾಣಿ ಯಲ್ಲಿ ಬಿತ್ತರಿಸಲಾಗಿದೆ.
 • ಟರ್ಕಿ ದೇಶದ ಇಸ್ತಾಂಬುಲ್ ನಗರದಲ್ಲಿ ನವೆಂಬರ್ 2008 ರಲ್ಲಿ ನಿವೃತ್ತೋತ್ತರ ಸೌಲಭ್ಯಗಳ ಕುರಿತು ಎಚ್ ಡಿ ಎಫ್ ಸಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಲಾಯಿತು.
 • ಮೇ 22, 2009 ರಿಂದ ಮೇ, 27 ರ ವರೆಗೆ ದಕ್ಷಿಣ ಆಫ್ರಿಕಾ ಪ್ರವಾಸ. ಜೊಹಾನಸ್ ಬರ್ಗ್ ಪ್ರಿಟೊರಿಯ ಮತ್ತು ಸನ್ ಸಿಟಿ ನಗರಗಳಿಗೆ ಭೇಟಿ.
 • ನ್ಯೂಜರ್ಸಿಯಲ್ಲಿ ನಡೆದ ಅಕ್ಕ-2010 ಕನ್ನಡ ಸಮ್ಮೇಳನದಲ್ಲಿ ಉಪನ್ಯಾಸ, ಕವಿತಾ ವಾಚನ.
 • 2010 ರ ನವೆಂಬರ್ ನಲ್ಲಿ ಹಾಂಕಾಂಗ್ ನಲ್ಲಿ ಸಾರ್ವಜನಿಕ ಸಾರಿಗೆಯ ಹಣಕಾಸು ನೀತಿ ಕುರಿತು ಯುಐಟಿಪಿ ಏಸಿಯಾ ಪೆಸಿಫಿಕ್ ಕಾಂಗ್ರೆಸ್ ನಡೆಸಿದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಲಾಯಿತು
 • ಮತ್ತು ಶಾಂಘೈ ನಗರಕ್ಕೆ ಭೇಟಿ ನೀಡಿ ನಗರ ಸಾರಿಗೆ ಕುರಿತು ಅಧ್ಯಯನ ನಡೆಸಲಾಯಿತು
 • 2014 ರ ಬೆಂಗಳೂರು ಲಿಟರರಿ ಫೆಸ್ಟಿವಲ್ ನಲ್ಲಿ ಕವಿತಾವಾಚನ ಮತ್ತು ಚರ್ಚೆ.
 • ದಿ.29-30, ಜೂನ್ 2015 ರಲ್ಲಿ ಇಂಗ್ಲೆಂಡಿನ, ನಾರ್ವಿಚ್ ನಗರದ ಯೂನಿವರ್ಸಿಟಿ ಆಫ್ ಈಸ್ಟ್ ಆಂಗ್ಲಿಯಾ ದಲ್ಲಿ ನಡೆದ 'ದಲಿತ್ ಲಿಟರೇಚರ್ ಇನ್ ಟ್ರಾನ್ಸಲೇಷನ್' ಕುರಿತು ನಡೆದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಬಂಧ ಮಂಡನೆ, ಕವಿತಾ ವಾಚನ, ಚರ್ಚೆ.
 • ಮೇ 11-27, 2016 ರಲ್ಲಿ ಇಂಗ್ಲೆಂಡಿನ ನಾಟಿಂಗ್ಹ್ಯಾಮ್ ವಿಶ್ವವಿದ್ಯಾಲಯದಲ್ಲಿ ಏ ಎಚ್ ಆರ್ ಸಿ ನೆಟ್ವರ್ಕ್ ಆಹ್ವಾನದ ಮೇರೆಗೆ ಕಾವ್ಯವಾಚನ, ಸಂವಾದ, ಸಾರ್ವಜನಿಕ ವೇದಿಕೆ, ವೈರ್ಡ್ ಕೆಫೆಯಲ್ಲಿ ಕವಿತೆ ಓದು.
ಸಂಘ/ಸಂಸ್ಥೆಗಳಲ್ಲಿ :
 • ದಲಿತ ಸಂಘಟನೆಗಳು ಮತ್ತು ರಂಗತಂಡಗಳೊಡನೆ ಸಮುದಾಯ ಚಟುವಟಿಕೆಗಳಲ್ಲಿ ಸಕ್ರಿಯ ಪಾತ್ರ
 • ಅಧ್ಯಕ್ಷರು, ಸಂಬುದ್ಧ ಎಜುಕೇಷನ್ ಅಂಡ್ ಚಾರಿಟಬಲ್ ‍ಟ್ರಸ್ಟ್, ಚಾಮರಾಜನಗರ.
 • ಗೌರವಾಧ್ಯಕ್ಷರು, ಅಂತರರಾಷ್ಟ್ರೀಯ ಬೌದ್ಧ ಯುವ ಸಂಘಟನೆ, ಚಾಮರಾಜನಗರ ಶಾಖೆ.
 • ಸಂಸ್ಥಾಪಕ ಅಧ್ಯಕ್ಷರು, ಬೌದ್ಧ ಸಾಹಿತ್ಯ ಮತ್ತು ಸಾಂಸ್ಕೈತಿಕ ಸಂಘ, ಗದಗ.
 • ನಿರ್ದೇಶಕರು, ದಲಿತ ಸಾಹಿತ್ಯ ಪರಿಷತ್, ರಾಜ್ಯ ಘಟಕ, ಗದಗ.
 • ಸದಸ್ಯರು, ದಲಿತ ಅಧ್ಯಯನ ಪೀಠ, ಕನ್ನಡ ವಿ.ವಿ. ಹಂಪಿ, 2007-08.
 • ಸದಸ್ಯ, ಪ್ರಕಟಣಾ ಮಂಡಳಿ, ಕನ್ನಡ ಸಾಹಿತ್ಯ ಪರಿಷತ್ತು 2016.
ರಂಗಭೂಮಿ/ ದೃಶ್ಯ ಮಾಧ್ಯಮ :
 • ರಂಗಾಯಣ, ಮ್ಯೆಸೂರು ನಡೆಸಿದ ರಾಷ್ಟ್ರೀಯ ನಾಟಕೋತ್ಸವ -2003 ರಲ್ಲಿ `ಬಹುರೂಪಿ' ಕಾವ್ಯನಾಟಕದ ರಚನೆ ಮತ್ತು ನಿರ್ದೇಶನ
 • ಜ್ಞಾನಪೀಠ ಪ್ರಶಸ್ತಿ ವಿಜೇತರ ನಾಟಕೋತ್ಸವದಲ್ಲಿ ಡಾ. ಯು.ಆರ್. ಅನಂತಮೂರ್ತಿಯವರ ಕಥೆಯಾಧಾರಿತ 'ಮೌನಿ' ನಾಟಕ ನಿರ್ದೇಶನ
 • ಕೃಪಾಕರ್ ಸೇನಾನಿ ನಿರ್ದೇಶನದ ಪೂ.ಚಂ.ತೇ ಅವರನ್ನು ಕುರಿತ ಸಾಕ್ಷ್ಯ ಚಿತ್ರ 'ಮಾಯಾಲೋಕ'ದಲ್ಲಿ ಕರ್ವಾಲೊ ಪಾತ್ರದಲ್ಲಿ ನಟನೆ
ಪಠ್ಯ ಪುಸ್ತಕಗಳಲ್ಲಿ :
 • ಕೆಂಡಮಂಡಲ' ನಾಟಕ ಕರ್ನಾಟಕ ವಿ. ವಿ. ಯ ಬಿ. ಎ. ದ್ವಿತೀಯ ಸೆಮ್ ಗೆ ಪಠ್ಯವಾಗಿದೆ.
 • ಸುಮಾರು 25 ಕ್ಕೂ ಹೆಚ್ಚು ಕವಿತೆಗಳು ಪ್ರೌಢಶಾಲೆ, ಪದವಿ ಪೂರ್ವಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಪಠ್ಯವಾಗಿವೆ.
 • ಮಹಾರಾಷ್ಟ್ರ ಸರ್ಕಾರವು ಮೊದಲ ಪಿ.ಯು. ಕನ್ನಡ ವಿಷಯಕ್ಕೆ 'ನಾನೊಂದು ಮರವಾಗಿದ್ದರೆ' ಕವಿತೆಯನ್ನು ಪಠ್ಯವಾಗಿ ಅಳವಡಿಸಿದೆ.
 • ದೆಹಲಿಯ ಸಿ.ಬಿ.ಎಸ್.ಸಿ 12ನೆ ತರಗತಿಯ ಕನ್ನಡ ಭಾಷಾ ವಿಷಯಕ್ಕೆ 'ರೈಲಿನ ಅಂತರಂಗ- ಬಹಿರಂಗ' ಕವಿತೆ ಪಠ್ಯವಾಗಿದೆ.
 • ಪಶ್ಚಿಮ ಬಂಗಾಲ ವಿಶ್ವವಿದ್ಯಾಲಯದ ಇಂಗ್ಲಿಷ್ ಪಠ್ಯದಲ್ಲಿ ಅನುವಾದಿತ ಕವಿತೆಗಳನ್ನು ಬೋಧಿಸಲಾಗುತ್ತಿದೆ.
 • ಇಂಗ್ಲೆಂಡಿನ ನಾಟಿಂಗ್ಹ್ಯಾಮ್ ಟ್ರೆಂಟ್ ವಿಶ್ವವಿದ್ಯಾಲಯದಲ್ಲಿ ಅನುವಾದಿತ ಕವಿತೆಗಳನ್ನು ಬೋಧಿಸಲಾಗುತ್ತಿದೆ.
ಬಹುಮಾನ/ಪುರಸ್ಕಾರ :
 • ನಾಡಚೇತನ ಪ್ರಶಸ್ತಿ- ರಂಗಚೇತನ ಸಂಸ್ಥೆ ಬೆಂಗಳೂರು.
 • 1999 ರಲ್ಲಿ ಟೊರಾಂಟೋ ಕನ್ನಡ ಸಂಘ, ಕೆನಡಾ ಇವರಿಂದ ಪುರಸ್ಕಾರ.
 • ನಾನೊಂದು ಮರವಾಗಿದ್ದರೆ ಕೃತಿಗೆ ಶೂದ್ರ ಪತ್ರಿಕೆಯ ಜಿ.ಎಸ್.ಎಸ್. ಕಾವ್ಯ ಸ್ಪರ್ಧೆ 1998 ರಲ್ಲಿ ಪ್ರಥಮ ಬಹುಮಾನ.
 • ವಾರಂಬಳ್ಳಿ ಕಾವ್ಯ ಪ್ರಶಸ್ತಿ 1999.
 • ಮೃತ್ಯುಂಜಯ ಸಾರಂಗಮಠ ಕಾವ್ಯಪ್ರಶಸ್ತಿ 1999.
 • ಮೋಹದ ದೀಪ ಕಥಾ ಸಂಕಲನಕ್ಕೆ ಶಿರಸಂಗಿ ಲಿಂಗರಾಜ ಸಾಹಿತ್ಯ ಪ್ರಶಸ್ತಿ, 2000 ಅಥಣಿ,
 • ಅಪರಿಮಿತದ ಕತ್ತಲೆ ಕೃತಿಗೆ ಡಾ. ನಾಗಲೋಟಿಮಠ ಸಾಹಿತ್ಯ ಪ್ರಶಸ್ತಿ,
 • ಒಟ್ಟಾರೆ ಸಾಹಿತ್ಯ ಕೃಷಿಗೆ ಬೇಂದ್ರೆ ಪ್ರಶಸ್ತಿ, 2001- ಬೇಂದ್ರೆ ಪ್ರತಿಷ್ಠಾನ, ಧಾರವಾಡ ಜಿಲ್ಲೆ
 • ಡಾ. ರಾಗೌ ಸಾಹಿತ್ಯ ಪ್ರಶಸ್ತಿ - 2009, ಕರ್ನಾಟಕ ಸಂಘ, ಮಂಡ್ಯ
 • ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕನ್ನಡ ಕ್ರಿಯಾ ಸಮಿತಿಯಿಂದ 'ಸಾರಿಗೆ ರತ್ನ' ಪ್ರಶಸ್ತಿ
 • 2009 ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ
 • 2013 ರಲ್ಲಿ ಆಳ್ವಾಸ್ ನುಡಿಸಿರಿ ಪ್ರಶಸ್ತಿ
 • 2014 ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
 • 2015 ರಲ್ಲಿ ಮಲ್ಲೇಪುರಂ ಜಿ. ವೆಂಕಟೇಶ ಸಾಹಿತ್ಯ ಪ್ರಶಸ್ತಿ, ಮಲ್ಲೇಪುರಂ ಪ್ರತಿಷ್ಠಾನ ಕಲ್ಬುರ್ಗಿ, ಇವರಿಂದ.
 • 2016 ರಲ್ಲಿ ಬಿ. ಬಸವಲಿಂಗಪ್ಪ ಸಾಹಿತ್ಯ ಪ್ರಶಸ್ತಿ
 • ಮಾರ್ಚ್2010, ರಲ್ಲಿ ನಡೆದ ಚಾಮರಾಜನಗರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಗೌರವ.
 • ಕಲ್ಯಾಣ ನಾಡಿನ ಶರಣ ಪರಿಷತ್ತು, 2011ರ ಏಪ್ರಿಲ್ 20, 21, 22 ರಂದು ಆಯೋಜಿಸಿದ್ದ ಕಲ್ಯಾಣ ನಾಡಿನ ಶರಣ ಸಮ್ಮೇಳನದ ಸರ್ವಾಧ್ಯಕ್ಷ ಗೌರವ.
 • ದಲಿತ ಸಾಹಿತ್ಯ ಪರಿಷತ್ತು ಕೊಪ್ಪಳದಲ್ಲಿ 2011 ಜೂ. 18, 19 ರಂದು ಏರ್ಪಡಿಸಿದ ಅಖಿಲ ಕರ್ನಾಟಕ ದಲಿತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಗೌರವ.
ಕವಿಯನ್ನು ಕುರಿತು :
 • ಗದುಗಿನ ಕ್ರಿಯೇಟಿವ್ ಕಮ್ಯುನಿಕೇಷನ್ಸ್ "ಕವಿ ಮೂಡ್ನಾಕೂಡು" ಎಂಬ ಪ್ರಾತ್ಯಕ್ಷಿಕೆಯನ್ನು ಪ್ರೊ. ಸಿದ್ದುಯಾಪಲಪರವಿ ಅವರ ನಿರ್ದೇಶನದಲ್ಲಿ ಹೊರತಂದಿದೆ.
 • ವಾರ್ತಾ ಮತ್ತು ಪ್ರಚಾರ ಇಲಾಖೆಯು 'ನೆಲದ ಸಿರಿ' ಮಾಲಿಕೆಯಡಿಯಲ್ಲಿ 10 ನಿಮಿಷಗಳ ಒಂದು ಸಾಕ್ಷ್ಯ ಚಿತ್ರವನ್ನು ನಿರ್ಮಿಸಿದೆ.
 • 'ಮುಂಜಾನೆ ಸೂರ್ಯ' ಧ್ವನಿ ಸುರುಳಿಯನ್ನು ಲಹರಿ ಆಡಿಯೋ ಸಂಸ್ಥೆ ಹೊರತಂದಿದೆ.
 • ದೂರದರ್ಶನ ಮತ್ತು ಇತರ ದೃಶ್ಯವಾಹಿನಿಗಳಲ್ಲಿ ಸಂದರ್ಶನ, ಚರ್ಚೆಗಳು ಬಿತ್ತರವಾಗಿವೆ.
 • 'ಮೂ. ಚಿ. ಬದುಕು ಬರಹ' ಸಂಶೋಧನಾ ಮಹಾ ಪ್ರಬಂಧಕ್ಕೆ ಗುಲ್ಬರ್ಗ ವಿ.ವಿ. ಯಿಂದ ಮಲ್ಲೇಶಪ್ಪ ಎಂಬುವರಿಗೆ ಪಿ.ಎಚ್.ಡಿ. ಲಭಿಸಿದೆ.
 • ಕವಿಯ ಕೃತಿಗಳನ್ನು ಕುರಿತು ನಡೆದ ವಿಚಾರಸಂಕಿರಣಗಳು ಮತ್ತು ಇತರ ಬರಹಗಳನ್ನು ಸಂಗ್ರಹಿಸಿ 'ಬಯಲ ಬೆಳಕು' ಎಂಬ ಗ್ರಂಥವನ್ನು ಡಾ. ಅಪ್ಪಗೆರೆ ಸೋಮಶೇಖರ ಅವರು ಸಂಪಾದಿಸಿ 'ದೇಸಿ ಪುಸ್ತಕ'ದಿಂದ ಪ್ರಕಟಿಸಿದ್ದಾರೆ (ಎರಡು ಮುದ್ರಣಗಳು).
ಮೂಡ್ನಾಕೂಡು ಚಿನ್ನಸ್ವಾಮಿ ಸಾಹಿತ್ಯ ಸಂಕಿರಣ/ಚರ್ಚೆ :
 • ಕನ್ನಡ ಸಾಹಿತ್ಯ ಪರಿಷತ್ತು, ಮೈಸೂರು ಜಿಲ್ಲೆ, ದಿ. 06.04.03 ರಂದು
 • ಭಾರತ ಯಾತ್ರಾ ಕೇಂದ್ರ ಮತ್ತು ರಂಗವಾಹಿನಿ, ಚಾಮರಾಜನಗರ, ಇವರಿಂದ 'ಹೊನ್ನೇರು ಬಂತು ತನ್ನೂರಿಗೆ' 14 ನವೆಂಬರ್ 2004 ರಂದು
 • ದಲಿತ ಸಾಹಿತ್ಯ ಪರಿಷತ್ತು, ಕಲಬುರ್ಗಿ 9 ನೇ ಜನೆವರಿ 2005 ರಂದು
 • ಕರ್ನಾಟಕ ಸಾಹಿತ್ಯ ಅಕಾಡೆಮಿಯು ಸೆಪ್ಟೆಂಬರ್ 2005 ರಲ್ಲಿ "ಕಾವ್ಯದ ಹೊಸ ಓದು" ಎಂಬ ಕಾರ್ಯಕ್ರಮವನ್ನು ಗುಲ್ಬರ್ಗಾದಲ್ಲಿ ಹಮ್ಮಿಕೊಂಡು ಇವರ ಕಾವ್ಯವನ್ನು ಕುರಿತು ಚರ್ಚೆ ನಡೆಸಿದೆ.
 • ಝೆನ್ ರೈಟರ್ಸ್ ಫೋರಮ್ 'ಕವಿ ಮೂಡ್ನಾಕೂಡು ಕಾವ್ಯ ಪ್ರವಾಸ: ಒಂದು ಸಂವಾದ' ಕಾರ್ಯಕ್ರಮವನ್ನು ದಿ. 20-01- 2008 ರಂದು ನಡೆಸಿದೆ.
 • ಬೆಂಗಳೂರು ವಿ,ವಿ, ಕನ್ನಡ ಅಧ್ಯನ ಕೇಂದ್ರದಲ್ಲಿ ಜನೆವರಿ2013 ರಲ್ಲಿ ರೊವೀನಾ ಹಿಲ್ ರವರ ಜತೆ ಕಾವ್ಯ ವಾಚನ ಮತ್ತು ಚರ್ಚೆ
 • ಸುಚಿತ್ರಾ ಸಾಹಿತ್ಯ ವೇದಿಕೆ, ಬೆಂಗಳೂರು ಇಲ್ಲಿ ಕಾವ್ಯ ವಾಚನ ಮತ್ತು ಚರ್ಚೆ.
 • ಉ. ಕ. ಜಿಲ್ಲೆಯ ಕಾವ್ಯಬೋಧಿ' ವೇದಿಕೆಯಿಂದ ದಿ 21-3-2014 ರಂದು ಹೊನ್ನಾವರದಲಿ ಕಾವ್ಯ ವಾಚನ ಮತ್ತು ಸಂವಾದ.
 • ದಿ. 31-10-2014 ರಂದು ಹೈದರಾಬಾದಿನ ಇ.ಎಫ್. ಎಲ್. ವಿ.ವಿ. ಯ ಇಂಗ್ಲಿಷ್ ವಿಭಾಗದಲ್ಲಿ ಕಾವ್ಯ ವಾಚನ ಮತ್ತು ಚರ್ಚೆ
 • ದಿ. 14-11-2014 ರಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿ.ವಿ. ಯ ರಾಜ್ಯಶಾಸ್ತ್ರ ವಿಭಾಗದಲ್ಲಿ ಸಂವಾದ.
 • ದಿ. 22-06-2015 ರಂದು ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಬೆಂಗಳೂರಿನ ಕಛೇರಿ ಸಭಾಂಗಣದಲ್ಲಿ 'ಕವಿಸಂಧಿ' ಕಾರ್ಯಕ್ರಮ, ಕವನ ವಾಚನ ಮತ್ತು ಸಂವಾದ.
-->
Mudnakudu Chinnaswamy Copyright 2013 All rights reserved.