Poet, Writer

ಗಡಿನಾಡು ಚಾಮರಾಜನಗರ ಜಿಲ್ಲೆಯವರಾದ ಡಾ. ಮೂಡ್ನಾಕೂಡು ಚಿನ್ನಸ್ವಾಮಿ (1954) ಕನ್ನಡದ ಹಿರಿಯ ಕವಿಗಳಲ್ಲಿ ಒಬ್ಬರು. ಎಂ.ಕಾಂ., ಮತ್ತು ಎಂ.ಎ. (ಕನ್ನಡ)., ಪದವೀಧರರಾದ ಇವರು ಬೆಂಗಳೂರು ಮಹಾನಗರ ಸಾರಿಗೆ ನಿಗಮದಲ್ಲಿ ನಿರ್ದೇಶಕರು (ಹಣಕಾಸು) ಹುದ್ದೆಯಲ್ಲಿದ್ದಾರೆ. ಸಾಹಿತ್ಯ, ಸಂಸ್ಕೃತಿ, ರಂಗಭೂಮಿ, ಸಮಾಜ ಸೇವೆ ಇವರ ಪ್ರವೃತ್ತಿಗಳು. ಇದುವರೆಗೆ 24 ಪುಸ್ತಕಗಳನ್ನು ಹೊರತಂದಿರುವ ಇವರ ಪ್ರಮುಖ ಆಸಕ್ತಿ ಕವಿತೆ. ಮತ್ತೆ ಮಳೆ ಬರುವ ಮುನ್ನ, ನಾನೊಂದು ಮರವಾಗಿದ್ದರೆ, ಚಪ್ಪಲಿ ಮತ್ತು ನಾನು, ಪ್ರಮುಖ ಕವಿತಾಸಂಕಲನಗಳು. ಮೋಹದ ದೀಪ, ಕಥೆ. ಕೆಂಡ ಮಂಡಲ, ಬಹುರೂಪಿ - ನಾಟಕಗಳು ಹಾಗೂ ವೈಚಾರಿಕ ಬರಹಗಳಾದ, ನೊಂದವರ ನೋವು, ಒಂದು ಕೊಡ ಹಾಲಿನ ಸಮರ, ಅಪರಿಮಿತದ ಕತ್ತಲೆ ಇವರ ಇತರ ಪ್ರಮುಖ ಕೃತಿಗಳು.

Mudnakudu Chinnaswamy (1954) a well known Kannada Poet hails from Mudnakudu village in Chamarajanagar District of Karnataka. He has two post graduate degrees viz., M.Com., M.A., with a D.Lit. in Social Sciences. He is Director (Finance) in Bangalore Metropolitan Transport Corporation by profession. Poetry is his passion but worked in other genre of literature as well, besides having a wide range of interests in culture, theatre and social work. He has brought out 24 books so far, which include 6 collections of poetry, 4 of essays, 3 plays and a collection of short stories.

Welcome to Dr.Mudnakudu Chinnaswamy’s Web Portal

ಡಾ. ಮೂಡ್ನಾಕೂಡು ಚಿನ್ನಾಸ್ವಾಮಿ ಕನ್ನಡ ಸಾಹಿತ್ಯದಲ್ಲಿ ಹೊಸ ಒಳಹಿನ ಕವಿಯಾಗಿ ಬುದ್ಧನ ಮಾರ್ಗದಲ್ಲಿ ಹೊಸ ದಾರಿಗಳನ್ನು ಕ್ರಮಿಸುತ್ತಾ ಬಂದವರು. ಶಮಗುಣದ ಮಂದಸ್ಮಿತ, ಅನ್ವೇಷಣೆಯ ಕಣ್ಣೋಟ, ಸಮುದಾಯವನ್ನು ಸೇರಿಸಿಕೊಂಡು ಪ್ರಶಾಂತವಾಗಿ ನಡೆಯುವ ದಿಟ್ಟ ಹೆಜ್ಜೆ ಇವೆಲ್ಲ ಮೂಡ್ನಾಕುಡು ಬದುಕು ಬರಹಗಳಲ್ಲಿ ಕಾಣುವ ಜಲಚಿಹ್ನೆಗಳು. ಕವನ, ಕಥೆ, ನಾಟಕ, ವ್ಯಕ್ತಿ ಚಿತ್ರ, ಚಿಂತನ, ಅನುವಾದ, ಸಂಪಾದನೆ ಹೀಗೆ ಎಲ್ಲಾ ಹೆಜ್ಜೆ ಇಟ್ಟರೂ ಅಲ್ಲೆಲ್ಲ ಬಹುರೂಪಿಯಾಗಿ ನೊಂದವರ ನೋವು ಚಂದಿರನ ಕಣ್ಣಾಗಿ, ಹಿಂಗಲಾರದ ಹುಣ್ಣಾಗಿ ಬೆಳೆಯುತ್ತ ಅಂತಿಮವಾಗಿ ಬೋಧಿವೃಕ್ಷವಾಗಿ ಚಾಚಿಕೊಳ್ಳುವ ಸಂಕಥನ ಒಂದು ಅದ್ಭುತ ರೂಪಕ. ಅಂಬೇಡ್ಕರ್ ಬದುಕು ಮತ್ತು ಬರಹಗಳು ಕೊಡುವ ರೂಪಕದ ರೂಪಾಂತರಗಳು ಮೂಡ್ನಾಕೂಡು ಅವರ ಬರಹಗಳಲ್ಲಿ. ಕನ್ನಡದ ಮಣ್ಣಿನಲ್ಲಿ ಕಣ್ಣು ಕಿವಿ ಮೂಗುಗಳಿಗೆ ಹೊಸ ಅನುಭವವನ್ನು ಕೊಡುತ್ತವೆ. ಚಪ್ಪಲ್ಲಿಯಿಂದ ಬೋಧಿವೃಕ್ಷದವರೆಗೆ ದುಃಖದ ನೋವು ಮತ್ತು ಆನಂದದ ಶಾಂತಸ್ಠಿತಿಯವರೆಗಿನ ಬಹುರೂಪಿ ಚಿಂತನಾವಿನ್ಯಾಸಗಳು ಮೂಡ್ನಾಕೂಡು ಬರಹಗಳು ಅನನ್ಯತೆಯನ್ನು ಪ್ರಕಟಿಸುತ್ತವೆ.

ಮೈಸೂರು, ಚಾಮರಾಜನಗರ ಮತ್ತು ಗುಲ್ಬರ್ಗಾಗಳಲ್ಲಿ ನಡೆದ ಮುಡ್ನಾಕೂಡು ಸಾಹಿತ್ಯ ಮಂಥನಗಳು, ಸ್ಪಂದನ ಪ್ರತಿಸ್ಪಂದನಗಳೊಂದಿಗೆ ಬೇರೆ ಬೇರೆ ಸಂದರ್ಭಗಳಲ್ಲಿ ಅವರ ಸಾಹಿತ್ಯದ ಅನುಸಂಧಾನ ನಡೆಸಿದ ಭಿನ್ನ ಚಿಂತನೆಯ ಲೇಖನಗಳು ಇಲ್ಲಿ ಆಯ್ಕೆಗೊಂಡಿವೆ. ಜೊತೆಗೆ ಚಿನ್ನಾಸ್ವಾಮಿ ಅವರ ವ್ಯಕ್ತಿತ್ವ ಮತ್ತು ಅವರ ಜೊತೆಗಿನ ಸಂದರ್ಶನ ಹಾಗೂ ಅವರನ್ನು ಕುರಿತ ಇಂಗ್ಲೀಷ್ ಲೇಖನಗಳು ಕೂಡ ಮುಡ್ನಾಕೂಡು ಅನುಸಂಧಾನಕ್ಕೆ ಹೆಚ್ಚಿನ ವ್ಯಾಪಕತೆಯನ್ನು ತಂದುಕೊಟ್ಟಿವೆ. ಹಿರಿಯ ಸಂಶೋಧಕ, ಕವಿ ಡಾ. ಎಲ್. ಬಸವರಾಜು ಅವರು ' ಅವರ ಮಾತೆಲ್ಲ ಚಿನ್ನ-ಸ್ವಾಮಿ' ಎಂದಿರುವಂತೆ ಸಂಯಮ, ಪಕ್ವತೆಯ ಅಭಿವ್ಯಕ್ತಿ, ಪ್ರೀತಿಯ ಒಳಗೊಳ್ಳುವಿಕೆ ಇಪ್ಪತ್ತೊಂದನೇ ಶತಮಾನಕ್ಕೆ, ನವಭೌದ್ಧಿಕ ಜಗತ್ತಿಗೆ ನವಬುದ್ಧತ್ವದ ಬೆಳಕಾಗಿ ಮುಡ್ನಾಕೂಡು ಅವರ ವ್ಯಕ್ತಿತ್ವ ಮತ್ತು ಸಾಹಿತ್ಯದ ಅಧ್ಯಯನ ಸಂತೋಷವನ್ನು ಕೊಡುತ್ತದೆ. ಹೀಗಾಗಿ ಸಾಂಪ್ರದಾಹಿಕ ವಿಚಾರ ಸಂಕಿರಣಗಳ ಲೇಖನಗಳಿಗಿಂತ ಬೇರೆಯಾಗಿ ಆಪ್ತತೆ, ಆತ್ಮೀಯತೆಯ ಅವರಣವೊಂದರ ಸೃಷ್ಟಿ ಈ ಗ್ರಂಥದ ಓದಿನಿಂದ ದೊರೆಯುತ್ತದೆ. ಸಾರಿಗೆಯ ಬಸ್ಸಿನಲ್ಲಿ ಕಿರುವಿಶ್ವದ ಗದ್ದಲದ ನಡುವೆ ಕೆ.ಎಸ್. ನರಸಿಂಹಸ್ವಾಮಿ ಅವರ ಮೈಸೂರು ಮಲ್ಲಿಗೆಯ ಕವನಗಳ ನಾದಲೀಲೆಯಂತೆ ಇಪ್ಪತ್ತೊಂದನೇ ಶತಮಾನದ ಜಾಗತೀಕರಣದ ಭೋಗ- ಹಿಂಸೆಯ ಅರ್ಭಟದ ನಡುವೆ ಮುಡ್ನಾಕೂಡು ಚಿನ್ನಾಸ್ವಾಮಿ ಅವರ ಕವನಗಳು ಮತ್ತು ಸಾಹಿತ್ಯ ನಮಗಾಗಿ ಪುಟ್ಟ 'ವಿಹಾರ' ವೊಂದನ್ನು ನಿರ್ಮಿಸುತ್ತವೆ.

Mudnakudu Chinnaswamy Copyright 2013 All rights reserved.