Literature Other Languages Spanish English Kannada

ಸಾಹಿತ್ಯ

ಕಾವ್ಯ

 1. ಅಜ್ಜಿ ಮತ್ತು ಮೊಮ್ಮಗಳು
 2. ಅಧೋಗತಿ
 3. ಅಳುವ ಬುದ್ಧ
 4. ಈ ಪ್ರಮದೆಯರೇ ಹೀಗೆ
 5. ಊರ ತೆಂಕಣ ತಜ್ಞರು
 6. ಎಲುಬಿನ ಹಂದರದೊಳಗೆ
 7. ಏಕಾಕಿತನ
 8. ಕಂದು ಬಣ್ಣದ ಒಂದು ಬಿಡಿ ನೀಳ್ಗೂದಲು
 9. ಕಡಬಡಯ್ಯಾ
 10. ಕಣ್ಣು ಕಿವಿಯ ಕವಿ
 11. ಕತ್ತಲನ್ನು ಕುರಿತು
 12. ಕರುಣದ ಕಿರಣ
 13. ಕವಿ
 14. ಕಾಲಧರ್ಮ
 15. ಕೊಂಡಿಗಳು ಮತ್ತು ಮುಳ್ಳುಬೇಲಿಗಳು
 16. ಗಿರಿಜನರು
 17. ಗೆದ್ದಲು ಹುಳುಗಳು
 18. ಗೋಧೂಳಿ
 19. ಚಲಾವಣೆಯ ನಾಣ್ಯಗಳು
 20. ಜೀತದಾಳಿನ ಗಾಥೆ
 21. ತಾಮಸಪುತ್ರನ ಕೊನೆಯ ದಿನಗಳು
 22. ತುತ್ತು ಅನ್ನಕ್ಕಾಗಿ
 23. ನಂದಿ ಹೋಯಿತೆ ಬೆಳಕು?
 24. ನನ್ನ ಅಸ್ಪೃಶ್ಯನ ಮಾಡಿದ....
 25. ನನ್ನ ಕವಿತೆಗೆ
 26. ನನ್ನ ಹತ್ತಿರದ ಬಂಧುಗಳು
 27. ನಾ ಮಾಡುವ ಶಬ್ದ
 28. ಬದುಕಿನ ಐದು ಅಧ್ಯಾಯಗಳು
 29. ಬಯಲ ನಿದ್ದೆ
 30. ಬೆತ್ತಲೆ ಸೇವೆ
 31. ಬೆಳಗು
 32. ಬೊಗಸೆಯಲಿ ಚಂದ್ರ
 33. ಭಿನ್ನದ ಬಯಲೂ ಅಭಿನ್ನದ ಆಲಯವೂ
 34. ಮತ್ತೆ ಮಳೆ ಬರುವ ಮುನ್ನ
 35. ಮಹಿಳೆಯರ ಕಾಲೇಜು
 36. ಮಾಯಾಪೆಟ್ಟಿಗೆಯೊಳಗೆ
 37. ಮಿಲರೇಪನಿಗೊಂದು ಮೊರೆ
 38. ರಮ್ಯ ಕವಿತೆ ಮತ್ತು ನಾನು
 39. ರೋಮನ್ ರಾಜ್ಯದ ಗುಲಾಮನೂ ಹಂಗರಹಳ್ಳಿಯ
 40. ಶಿಖರದೂರಿನಲ್ಲಿ ಒಂದು ಮುಂಜಾನೆ
 41. ಶೀರ್ಸಾಸನ
 42. ಸಂಬಂಧಗಳು ಅಂದು - ಇಂದು
 43. ಸಮುದ್ರ ಚುಂಚನ
 44. ಸಿರಿಗರ ಬಡಿದವರು
 45. ಸುಡುವ ಸೂರ್ಯನ ನಾಡಲ್ಲಿ
 46. ಸೂರ್ಯ ಚಂದ್ರರೆಂಬ ಗುಲಾಮರು
 47. ಹಣೆಬರಹ
 48. ಹೀಗೊಂದು ಬದುಕು
 49. ಹೀಗೊಂದು ಬವಣ

ನಾಟಕ

 1. ತಂತ್ರ ಮತ್ತು ಸಾಮಾಜಿಕ ಸಂಘರ್ಷ

ವೈಚಾರಿಕ

ಕಥೆ

 1. ಪಾಪ ಪ್ರಜ್ಞೆ

ಇತರೆ ಗದ್ಯ ಬರಹಗಳು

 1. ಇತರೆ ಗದ್ಯ ಬರಹಗಳು

ಅನುಬಂಧ

ಚಿನ್ನಸ್ವಾಮಿಯವರ ಕಥಾಲೋಕ

ಚಪ್ಪಲಿ ಮತ್ತು ನಾನು: ಮುನ್ನುಡಿ

ಮಾತು- ಮಂಥನ: ಮುನ್ನುಡಿ

ವಿಮರ್ಶೆ

ಚಂದಿರನ ಕಣ್ಣು ಇಂಗಲಾರದ ಹುಣ್ಣು; ಮಾಗಿದ ಮಾತು

ದಲಿತ ಕಾವ್ಯದ ಹೊಸದನಿ

ಸಂದರ್ಶನ

ದಲಿತರ ಸಮಷ್ಠಿ ನೋವಿನ ದನಿ

ವ್ಯಕ್ತಿತ್ವ

ಅವರ ಮಾತೆಲ್ಲ ಚಿನ್ನ-ಸ್ವಾಮಿ

ಸೌಂದರ್ಯಾನುಭೂತಿಯ ಕವಿ

ಅಧೋಲೋಕದಿಂದ ಬಂದ ಅಪರೂಪದ ಕವಿ

ವಿಚಾರ ಸಂಕಿರಣ

ಮೂಕ ಲೋಕಕ್ಕೆ ಮಾತು ನೀಡುವ ಪರಿ

ಅಜ್ಜಿ ಮತ್ತು ಮೊಮ್ಮಗಳು

ಅಂಥಾ ಒಂದೂರಲ್ಲಿ
ಇಂಥಾ ಒಂದಜ್ಜಿ

ಹಟ್ಟಿಯೊಳಗೊಂದು ಹಜಾರ
ಹಜಾರದಲ್ಲೊಂದು ಮೂಲೆ
ಮೂಲೆಗೊರಗೇ ಇತ್ತು

ಮರೆತ ಮೂಲೆಯಲ್ಲೊಂದು
ಸವೆದ ಕನ್ನಡವೇ ಸತ್ಯಬರಿಕೆ

-1-
ತೆವಳಾಡುವ ಎಳೆಗೂಸಿಗೆ
ಕಣ್ಣೆಸರು ಕಾಲೆಸರು ತಗುಲಿ
ಇಳಿ ತೆಗೆವಾಗ ಉರಿದು ಭುಗಿಲೇಳುವ
ಹಳೆಯ ಕಸಬರಿಕೆ.

ಹಾಗೆ ಮಾರಿ ಹಬ್ಬಕು ಮುಂಚೆ
ಊರಿಗೊದುಗುವ ಕಂಟಕಕ್ಕೆ
ತಾ ಮುಳುವಾಗಬಹುದೆಂದು
ದಿಗಿಲು ಬೀಳುವ ಅಜ್ಜಿ

ಹೊತ್ತಿಗೆ ಬಂದು ಬೀಳುವ ಮುದ್ದೆ
ಸೊಪ್ಪು; ಅಣಕಿಸುವ ಹರಿವಾಣ,
ಸೊಸೆ ಮುದ್ದುಗಳ ಖ್ಯಾನ, ಏನೆಲ್ಲ ವ್ಯಾಖ್ಯಾನ

ಮೂಲೆಯಲ್ಲಿರದಿದ್ದರೆ
ಊರುಗೋಲಿಡಿದು ಹಿತ್ತಲಿಗೆ
ಹಿತ್ತಲಿನಿಂದ ಮೂಲೆಗೆ
ತನ್ನ ಅಂತ್ಯ ಮೂಲೆಯಲ್ಲೇ ಆಗಲಿ
ಎಂದು ಧೇನಿಸುತ್ತಾ ಕೂಡುವುದು ಅಜ್ಜಿ
ಹಿತ್ತಲಾದರೆ ಎತ್ತಲು ಹೇಸಬಹುದೆಂದು

ನಡುವೆ ಕತ್ತಲ ಹಾದಿಯಲ್ಲಿ ಬೇಡ
ಕನಿಕರ ತುಂಬುವರು ಹಾದಿಗರೆಲ್ಲ

ಅಜ್ಜಿಯದು ಯಾವಾಗಲೂ
ಸಮಾಧಿಸ್ಥಿತಿ
ಸಮಾಧಿ ಕೂಳಿಗೆ ನೆಂಟರಿಷ್ಟ
ಕಾಗೆಗಳು ಎಷ್ಟು ಬರುವವೊ ಎಂಬ ಚಿಂತೆ

-2-
ಹಜಾರದಲ್ಲಿ ಕುಂಟೆಬಿಲ್ಲೆ ಆಡುವ
ಮೊಮ್ಮಗಳೇ ಆಗಾಗ ಮಿಂಚಿ
ಮಾಯವಾಗುವ ನಗೆಮುಗುಳು

ತನ್ನ ಗತಕಾಲದ ನೆನಪುಗಳೊಂದಿಗೆ
ಮೊಮ್ಮಗಳ ಚಿನ್ನಾಟವನ್ನು ಬೆಸೆಯುತ್ತಾ
ಜೀವನದಿಯ ನಿರಂತರತೆಯನ್ನು ಹುಡುಕುತ್ತಾ

ಬಿಡುವಿನ ವೇಳೆ ಮೊಮ್ಮಗಳ
ಕರೆದು 'ತಲೆ ನೋಡವ್ವ' ಕಡಿತ
ಹೆಣಿಗೆ ತಾ ಎನ್ನುತ್ತದೆ ಅಜ್ಜಿ

ಕೆರೆದ ಗಾಯ ಕಜ್ಜಿ
ಕೊಂಚ ಕಮಟು ವಾಸನೆಯನ್ನು ಸಹಿಸಿ
ಎಳೆ ಬಾಳೆ ಕೂರುತ್ತದೆ ಕಥೆಗಾಗಿ
ಸೀರಿಡಿದ ಸಿರಿಮುಡಿಯ
ಚಿಗುರ ಬೆರಳುಗಳು ಬೆದಕುವಾಗ

ಬಿಚ್ಚಿಕೊಳ್ಳುವುದು ಬೆರಗಿನದೊಂದು ಪರಂಪರೆ
ತೆರೆಯುವುದು ಭಂಡಾರ
ವಿಸ್ಮಯ ಕಥಾಲೋಕ
ಒಂದೊಂದು ಕೂದಲ ಬಗೆಯುವುದು
ಪುಟಗಳ ತಿಣುಕಿದಂತೆ
ಹೊಸ ಮಾತು ಹೊಸ ಗಾಳಿ

ಮುತ್ತುವ ಹೇನುಗಳ ಹೆಕ್ಕಿ
ಕುಕ್ಕುವ ಬೆರಳುಗಳು
ಶತ್ರು ಸೈನ್ಯವನ್ನು ಸದೆಬಡಿವ ಸೀರಣಿಗೆ

ಸುಕ್ಕುಗೆನ್ನೆಯ ಖಿನ್ನ ಕಾಲುವೆಗಳಲ್ಲಿ
ಕಣ್ಣೀರು : ಕಥೆ ಹೇಳಿದ್ದು ಮೊಮ್ಮಗಳೋ
ಕೇಳಿದ್ದು ಅಜ್ಜಿಯೊ ?

Mudnakudu Chinnaswamy Copyright 2013 All rights reserved.